Posts

Showing posts from 2019

ನಿರಂತರ 119

Image
ಅವಳ ಪ್ರೀತಿಯ ಕಿರಣ ನನ್ನ ಉಸಿರ ಚರಣ ನಿನಗೆ  ಬೀಳಲು ಒಂದಿದೆ ಕಾರಣ ಅದುವೇ ನೀನು ಹೊತ್ತ ನಗುವ ಆಭರಣ

ನಿರಂತರ 118

Image
ಕಣ್ಮುಚ್ಚಿ ನಿಂತರು ನಿನ್ನದೇ ಚಹರೆ ಮೂರು ಲೋಕದ ಸ್ವಪ್ನ ಸುಂದರಿಯೇ ತುಸು ಸಮೀಪಿಸಿದರೆ ಸಾವಂತೂ ಖಚಿತ ಪಾರಾಗೋ ಪುಣ್ಯಾತ್ಮ ನಾನಂತೂ ಅಲ್ಲ

ನಿರಂತರ 117

Image
ಕಾಲ ಬದಲಾಗಿದಿಯೋ ಅಣ್ಣತಮ್ಮ ಯಾರಿಗೂ ಆಗ್ಬೇಡ ನೀನಿಲ್ಲಿ ಗುಲಾಮ ಸಿಕ್ಕಿದಾಗ ಜಾರಿಕೊಂಡು ಮುಟ್ಬಿಡು ದಡನ ಚೇಂಜ್ ಆಗೋದೇ ಜನಗಳ ಹುಟ್ಟಗುಣ ಬದುಕಪ್ಪ ನಿಂಗಾಗಿ ಸ್ವಾರ್ಥಿ ಸಮಾಜದೊಳಗಡೆ 

ನಿರಂತರ 116

Image
ಕಣ್ತುಂಬ ನಕ್ಕಿದ್ದು ಯಾವಾಗ ಯಾಕಿಂಗಾಗಿದೆ  ನಂಬಾಳು ಇವಾಗ ಬಾಲ್ಯಾನೇ ಚೆನ್ನಾಗಿತ್ತು ತಿಳುವಳಿಕೆ ಇಲ್ದಾಗ  ತುಂಬಾನೇ ತಿಳ್ಕೊಂಡು ಹಾಳಾದ್ವಿ ಇವಾಗ

ನಿರಂತರ 115

Image
ನನಗೆ ಆಸೆಗಳೇ ಜಾಸ್ತಿ ಅದರಿಂದಲೇ ಕಣ್ಣೀರು ಜಾಸ್ತಿ ಮಿತವಾಗಿ ಬದುಕೋ ಜಾಯಿಮಾನ ನಂದಲ್ಲ ಅದರಿಂದಲೇ ಆಗುವುದು  ಅವಮಾನ  ನನ್ನ ಕಣ್ಣೀರಿಗಿಲ್ಲ ಬೆಲೆ  ತೋರಿಸ ಬೇಕಿಲ್ಲ ಅದರ ಕಲೆ ಇದ್ದಹಾಗೆ ಹೇಳುವುದು ನನ್ನ ಕಾಯಿಲೆ ಅರ್ಥವಾಗದು ಇನ್ನೊಬ್ಬರಿಗೆ ಅದರ ಸೆಲೆ 

ನಿರಂತರ 114

Image
ಕರುಣಿಸು ವರುಣ ಉಳಿವುದು ಮರಣ ದಿಕ್ಕು ತಪ್ಪಿ ಕಂಗಾಲಾಗಿದೆ ಬದುಕು  ಜೀವ ಜಂತುಗಳು ಮಿಡಿದಿವೆ ಹೃದಯ ಉಳಿಸು ಮಳೆರಾಯ ಸಾಕಾಗಿದೆ ಪ್ರಳಯ  ತಗ್ಗಿಸು ನಿನ್ನ ಶಕ್ತಿ ಕೊಟ್ಟುಬಿಡು ಮುಕ್ತಿ ಸಾಕು ಮಾಡು ನಿನ್ನ ರುದ್ರ ನರ್ತನ ಸೋತಿಹೆವು ನಾವು ಕಾಪಾಡು ನಮ್ಮ ಕಣ್ಣೀರು ಖಾಲಿ ನಿಲಿಸು ನಿನ್ನ ಅಬ್ಬರ 

ನಿರಂತರ 113

Image
ಬಡವಾಗಿದೆ ಬದುಕು ಕಾಯುತ ನಿಂತು ತಡವಾದರೂ ಸರಿಯೇ ಕಾಯುವೆ ಅನಂತ ಮರಳಿ ನಗುವ ಹೊತ್ತು ತಾ ಸಿಡುಕಿನ ಹೆಣ್ಣೇ ಕಾದು ಸಾಕಾಗಿದೆ ಓಡಲು ತುಸು ಬಂದರೆ ಬೇಗ ಉಳಿಯುವುದು ಹೃದಯಕೆ ಆಗುವ ಗಾಯ

ನಿರಂತರ 112

Image
                ಪ್ರೀತಿಯ ಕೃಷಿ ಪುಟ್ಟ ಕಥೆಯೊಂದು ಶುರುವಾಗಿದೆ ಹಚ್ಚ ಹಸಿರಿನ ಶೀರ್ಷಿಕೆಯ ಮೇಲೆ ಯಾವ ಜನ್ಮದ ನಂಟಿದು ನಮ್ಮಿಬ್ಬರಿಗೆ ನಂಬಿಕೆಯೇ ಬಂಡವಾಳ ಮುಂದಿನ ಪ್ರೀತಿಯ ತೇರಾ ಹೊತ್ತು ದಡ ಮುಟ್ಟಲು

ನಿರಂತರ 111

Image
ನನ್ನೊಳಗಿನ ನೋವಿಗೆ ನಾನೇ ಕಾರಣನು ಮನಸ್ಸಿನ ಜೈಲಿಗೆ ತಿಳಿದಿಲ್ಲ ಕಾನೂನು  ಸ್ವಚ್ಛ ಗೊಳಿಸಲು ಯಾವುದಿಲ್ಲ ಸಾಬೂನು ನಾನಾದೆ ಹೃದಯದ ಕಣ್ಣೀರಿಗೆ ಸೆರೆಸಿಕ್ಕ ಮೀನು

ನಿರಂತರ 110

Image
ಎದ್ದು ನಿಲ್ಲಬೇಕು ಕಲ್ಲು ಮುಳ್ಳಿನ ಹಾದಿಯಲ್ಲಿ ಜೀವನ ಮೃದು ಹಾಸಿಗೆಯಲ್ಲ ಬೆಂಕಿಯ ಬಾವಿ ಆತ್ಮವಿಶ್ವಾಸ ನಿನಗಿರಲು ತಡೆಹಿಡಿಯರು ಯಾರೂ ಪುಟಿದೇಳು ಒಂದು ದಿನ ತಿರುಗಿ ನೋಡುವುದು  ಜಗತ್ತು ಒಂದು ಕ್ಷಣ

ನಿರಂತರ 109

Image
ದೈರ್ಯವಿಲ್ಲವೇ ನನಗೆ ಭಯವೇಕೆ ಭಯವ ಬೆದರಿಸುವಾತ ನಾನಿಲ್ಲವೆ  ಅಂಜುತಾ ನಿಂತರೆ ಅಂಜಿಸುವರು ಮುನ್ನುಗಿದರೆ  ಮಣ್ಣು ಮುಕ್ಕುವರು ಗೆಲುವಿನ ನಾಗಲೋಕ ನನ್ನದೇ

ನಿರಂತರ 108

Image
                                  ಚಿಗುರೆಲೆ ಗತಕಾಲವೇ ಗತಿಸಿದರೂ ದೃತಿಗೆಡದೆ ನಿಂತಿರುವೆ ಕಾಲಚಕ್ರವ ಸುಳಿಯಲ್ಲಿ ಮಿಂದೆದ್ದು ಉಳಿದಿರುವೆ ಚಿಗುರೆಲೆಯಿಂದ ಹಣ್ಣೆಲೆಯಾಗಿ ಬೆಳೆದಿರುವೆ ಏರು ಪೇರಿನ ಸಂತೆಯಲ್ಲಿ ಯಾರಿಗೂ ಅಂಜದೆ ಅಚಲನಾಗಿರುವೆ

ನಿರಂತರ 107

Image
                                 ಪ್ರಕೃತಿ ಸೃಷ್ಟಿಯ ಸೊಬಗ ಹೊತ್ತ  ಅದ್ಬುತವು ನಾನೇನೇ ಗಿಡ ಗಂಟೆಗಳ ನಾದಸ್ವರದ ಗಾಯಕಿಯೂ ನಾನೇನೇ ಹಸಿರ ಅರಮನೆಯ ರಾಣಿಯು ನಾನೇನೇ ಪರಿಸರವ ಸರಿದೂಗಿಸೋ ಸುಂದರಿಯೂ ನಾನೇನೇ ನಿಮ್ಮವಳು ನಾನು ನನ್ನನ್ನು ಉಳಿಸಿ ನನ್ನನು ಬೆಳೆಸಿ

ನಿರಂತರ 106

Image
ನಮ್ಮಿಬ್ಬರ ಪ್ರೀತಿ ಅನುದಿನವು ನವೀನ ಎಂದೆಂದಿಗೂ ನಿಲ್ಲದು ಜಟಾಪಟಿಯ ಕದನ ಮೊಳಗುವುದು ಒಮ್ಮೊಮ್ಮೆ ಮಾತಿಲ್ಲದ ಮೌನ ನಮ್ಮಿಬ್ಬರ ಪ್ರೀತಿಯ ತೇರಿಗಿಲ್ಲ ಬಡತನ ಬಿಡಿಸಲಾಗದು ನಮ್ಮಿಬ್ಬರ ಬೆಸುಗೆಯ ಬಂಧನ

ನಿರಂತರ 105

Image
ಸುಮ್ಮನಿದ್ದರೆ ಸಾಕು  ಜಗತ್ತ ನೋಡುತ ವಿಸ್ಮಯವೂ ತಾನೇ ಕಣ್ತುಂಬುವುದು ನಿಮ್ಮ ಆಲೋಚನೆಯ ಅಂತರಂಗ ತಾನೇ ತಾನಾಗಿಯೇ ಸೃಷ್ಟಿಯಾಗುವುದು ಯಾವದು ಹೊಸತಲ್ಲ ಯಾವದು ಹಲತಲ್ಲ ಇರುವ ಇರುವಂತಿಕೆ ಗೋಚರಿಸುವುದು

ನಿರಂತರ 104

Image
ಯಾರಿವಳು ಅಪರೂಪದ ಅಪ್ಸರೆ ನೆಲೆ ನಿಂತಿಹಳು ನನ್ನ ಕನ್ಸೆರೆಯಲ್ಲಿ ನಿದಿರೆಯ ಹಾಳುಗೆಡವಿ ಜೀವವ ಹಿಂಡುತಿಹಳು ಚೂರಾದರೂ ತಿರುಗಿ ನೋಡಬಾರದೇ ಬಾಲೆ ನಿನಗೆ ತಾಳಿ  ಕಟ್ಟೋ ಸುಕುಮಾರ ನಾನಾಗಿರಬಹುದಲ್ಲವೇ ಜಾಣೆ 

ನಿರಂತರ 103

Image
ಕಾಲವೇ ಕಾಲವೇ ನನಗಾಗಿ ನಿಲ್ಲು ಒಂದು ಸಾರಿ ಹಳೆಯ ಖುಷಿಯನ್ನೆಲ್ಲ ಮತ್ತೆ ಹುಡುಕಿ ತರುವೆ ಮತ್ತೊಮ್ಮೆ ಬರಿದಾಗಿದೆ ಹೊಸ ಕನಸು ಹಳೆಯ ಖುಷಿಯ ಮೆಲುಕು ಹಾಕುವೆ ಇನ್ನೊಮ್ಮೆ ಕಾಲವೇ ಕಾಲವೇ ತಿರುಗಿ ನೋಡು ಇನ್ನೊಮ್ಮೆ ನನ್ನ ಖುಷಿಯ ಮರಳಿ ಕೊಡು ಮಗದೊಮ್ಮೆ

ನಿರಂತರ 102

Image
ಅವಳೇ ನನ್ನ ಕನ್ನಡಿ ಮನಸ ಓದೋ ಕಿನ್ನರಿ ಸೌಮ್ಯ ಮೊಗದ ಸುಂದರಿ ನಗುವ ಚೆಲ್ಲೋ ನಾಯಕಿ

ನಿರಂತರ 101

Image
ನಿನ್ನ ಸಿಹಿ ನೆನಪ ಸಾಗರದಲ್ಲಿ ಮಧುರ ಕ್ಷಣಗಳೇ ಉಲ್ಲಾಸದ ಅಲೆಗಳು ಪ್ರೀತಿಯ ಅನುರಾಗ ಅರಳಿಸಿ ಕೊಡೆಹಿಡಿದವಳು ನೀನಲ್ಲವೇ ನಿನ್ನ ಸಳೆತದ ಭೂಕಂಪಕ್ಕೆ  ಬಲಿಯಾದವನು ನಾನಲ್ಲವೇ

ನಿರಂತರ 100

Image
ದೇವರ ಉಡುಗೊರೆ ಭೂಮಿಗೆ ಹೆಣ್ಣಿನ ರೂಪದಲ್ಲಿ ವಾತ್ಸಲ್ಯವ ಹೊತ್ತು ಪ್ರೀತಿಯ ತೋರೊ ಕರುಣಾಮಯಿ ಮಮತೆಯ ತೊಟ್ಟಿಲ ಹೊತ್ತ  ತ್ಯಾಗಮಯಿ  ನಿನ್ನ ತೋಳಲ್ಲಿ ಕಂದಮ್ಮನಾಗಿ ಇರುವಾಸೆ ಕೊನೆತನಕ

ನಿರಂತರ 99

Image
ಉರಿಯೇ ಉರಿಯೇ ಮನದ ಬೆಂಕಿಜ್ವಾಲೆ ಮನದ ಒಡಲ ದಹಿಸಿ ನುಚ್ಚು ನೂರು ಮಾಡು ಆಸೆ ಎಂಬುದ  ನಾಶ ಮಾಡು ಕನಸ ಕಾಣೋ ಮನವ ಸುಡು ಬರಿದು ಮಾಡು ನನ್ನ ಹೃದಯ ದಹಿಸಿ ದಹಿಸಿ ಹೂತುಬಿಡು 

ನಿರಂತರ 98

Image
ನನ್ನ ಪಯಣದ ನಲ್ಮೆಯ ನಾವಿಕ ನಿನ್ನ ನೆರಳಲ್ಲೇ ಉಳಿಯುವ ತವಕ ನಿನ್ನ ಪ್ರೀತಿಯ ಅಲೆಗಳು ಬಂದಿಸಿವೆ ನನ್ನ ಅದೃಷ್ಟವೇ ಸರಿ ನೀ ನನ್ನ ವರಿಸಿರುವೆ ಕಳೆದೊಗಲು ಇನ್ನೇನಿದೆ  ನೀ  ಆವರಿಸಿದ ಮೇಲೆ ಸಮಯವೂ ಸರಿಯುತ್ತಿವೆ ಅದ್ಭುತವಾಗಿ ನೀ ನನ್ನ ಅಲಂಕರಿಸಿದ ಮರುಕ್ಷಣದಿಂದ ನೀ ಇದ್ದರೆ ಸನಿಹ ಮರೆತೋಗುವ ಜಗವ ಮಗುವಾಗುವ ಒಂದು ಕ್ಷಣ ನಿನ್ನ ಮಡಿಲೊಳಗೆ

ನಿರಂತರ 97

Image
ನಿತ್ಯ ಮಲೆನಾಡ ಮಧುವಣಗಿತ್ತಿ ಕಾದಿಹಳು ವರುಣನಾಗಮನಕ್ಕೆ ಹೊತ್ತಿಹಳು ಹಸಿರ ಬಣ್ಣದ ಅರಮನೆ  ಸಲುಹುತಿಹಳು ಬೂತಾಯಿ ಮಕ್ಕಳ ಇಬ್ಬನಿಗೂ ನಿನ್ನದೇ ಕಂಪು ರವಿಯನ್ನು ಬಚ್ಚಿ ತುಸು ಹೊತ್ತು ನಿನ್ನ ಕಾಪಾಡೋ ಹರ ಸಾಹಸ ಕಾನನದ ಕಂಪನ ಹೊಸ ಒಲುಮೆಯ ಇಂಪನ ಮಲೆನಾಡಿಗರಿಗೇನೇ ಗೊತ್ತು ಮಧುವಣಗಿತ್ತಿಯ ಗತ್ತು

ನಿರಂತರ 96

Image
ತುಸು ಅಂಜಿಕೆ  ನೀ ಇರದ ಸನಿಹದಲ್ಲಿ ನಿನ್ನದೇ ಮಧುರ ನೆನಪುಗಳು ಕಾಡುತ್ತಿವೆ ಪ್ರತಿಕ್ಷಣ ಚಂದಿರನಿಗೆ ಇವಳೇ ಬೆಳದಿಂಗಳು ಅಮಾವಾಸೆಯಲ್ಲಿ ನಿನ್ನ ನಗುವಿನ ಚಪ್ಪರದೊಳಗೆ ನನ್ನ ನೋವ ಮರೆಸೋ ಮದ್ದಿದೆ ಸ್ವಪ್ನದಲ್ಲೂ ನೋಡದ ಮಾಯಾಜಿಂಕೆಯ ಮರಿಮಗಳೇನೇ ನೀನು

ನಿರಂತರ 95

Image
ನೀವು ಅಂದುಕೊಂಡ ಹಾಗೆ ನಡೆಯಬೇಕೆಂದರೆ ನಿಮ್ಮ ನೆರಳನ್ನೇ ನಂಬಬೇಕು  ಹೊರತು ಮತ್ತರ ನೆರಳು ಕೂಡ ನಿಮ್ಮ ದಾರಿ ಜೊತೆ ಸಾಗದು

ನಿರಂತರ 94

Image
ಎಂಕಾಂಗಿ ನೋವಿಗೆ ಬೆಂಕಿ ಹಚ್ಚಲು ನಿನ್ನ ಕಿರುನಗೆಯ ಕಿಡಿಯೊಂದೇ ಸಾಕಲ್ಲವೇ ನನ್ನ ಕಹಿ ನೆನಪುಗಳ ಕಾಯಿಲೆಗೆ ನಿನ್ನ ಗೃಹ ಪ್ರವೇಶವೇ ಔಷಧೀಯಲ್ಲವೇ

ನಿರಂತರ 93

Image
ನೀ ಬರದ ದಾರಿಯ ನೆರಳ ಹಿಡಿದು ಕಾಯುತ್ತ ನಾನಿದ್ದೆ ಒಂಟಿ ಕಾಡ್ಗಿಚ್ಚನ್ನೇ ತೊಯ್ಯೋ ಮಳೆಯ ಹನಿಯಾಗಿ  ನೀ ಬಂದೆ  ದಾಟಿ ಸದ್ದಿಲ್ಲದೇ ಎಂದು ಮಾಡಿದೆಯೋ ನನ್ನ ಹೃದಯದ ಲೂಟಿ ಪಯಣಿಸೋಣ ಕೊನೆತನಕ ನಂಬಿಕೆಯ ಮೆಟ್ಟಿಲೇರಿ ಜಂಟಿ

ನಿರಂತರ 92

Image
ಕಾರಣವಾಯಿತು ಮದುರ ಬಂಧನಕ್ಕೆ ನಮ್ಮಿಬ್ಬರ ಪರಿಚಯ ಅದ್ಬುತ ಚಲುವೆ ನಿನಗಿಂದು ನೀಡುವೆ ಭರವಸೆಯ ಬೊಗಸೆಯಲ್ಲಿ ಬಚ್ಚಿಟ್ಟು ಕಾಪಾಡುವೆ  ನನ್ನ ಸಂಗಾತಿಯ ಕೊನೆ ತನಕ ಹಂಚಿಕೊಳ್ಳೋಣ ಭಾವಪೂರ್ಣ ಪ್ರೀತಿಯ

ನಿರಂತರ 91

Image
ಚಂದನದ ಗೊಂಬೆಯ ಅಪ್ಪುವ ಹೆಬ್ಬಯಕೆ ಅರಳಿಸಿದೆ ಮನಸ ಮೂಲೆಯೊಲ್ಲೊಂದು ಮೊಳಕೆ ಏನೆಂದು ಹೆಸರಿಡಲಿ ಇದರ ವರ್ಣನೆಗೆ ಶೀರ್ಷಿಕೆ ಎಂದು ಸಿದ್ಧವಾಗುವುದೋ ಇದಕೊಂದು ವೇದಿಕೆ

ನಿರಂತರ 90

Image
ಅರಿತು ನುಡಿದರೆ ಉಳಿವುದು ಸಂಬಂಧ ಅರಿಯದೆ ನುಡಿದರೆ ಹರಿವುದು ಸಂಬಂಧ ಸಂಬಂಧದ ಸಂಕೋಲೆ ನಾಲಿಗೆಯ ತುದಿಯಲ್ಲಿ ತಪ್ಪಿದರೆ  ಜಾರುವುದು ಸಂಬಂಧದ ಕೊಂಡಿ

ನಿರಂತರ 89

Image
ಅಲೆಗಳು ಕಾದಿವೆ ನಿನ್ನಯ ಸ್ಪರ್ಶಕೆ ಹನಿಗಳು ಕಿಡಿಕಾರಿವೆ ನಿನ್ನಯ ಶ್ವೇತವರ್ಣಕ್ಕೆ ಮರಳಿಗೂ ಮರೆಗು ನಿನ್ನಯ ಚಂದುಟಿಯ ಕಿರುನಗೆಗೆ ಸಾಗರಕು ಸಾಕಾಗಿದೆ ಸುಂದರಿಯ ನೋಡಿ

ನಿರಂತರ 88

Image
ನಿನ್ನ ಸನಿಹದಲ್ಲಿದೆ ಸಂಜೀವಿನಿ ಹೃದಯದ ನೋವಿಗಿದೆ ಪರಮೌಷಧಿ ಪರವಶನಾದೆ ನಿನ್ನ ನಗುವಿಗೆ ಕಳೆದೋಗಿ ಪುಟ್ಟ ಮೀನಾಗುವಾಸೆ ನಿನ್ನ ನಗೆಯ ಕಡಲೊಳಗೆ  ಜಾರಿ

ನಿರಂತರ 87

Image
ಕನ್ನಡಿಗೂ ಕಾಡುವಳು ಅಂದವ ತೋರಿಸಿ ಕಣ್ಣ ಮುಚ್ಚಾಲೆ ಆಡುವಳು ನಾಚಿಕೆಯ ಅಡಗಿಸಿ  ಸುಮ್ಮನೆ ತೊಂದರೆ ಕೊಡುವಳು ಸೀರೆಯ ಧರಿಸಿ ಕನ್ನಡಿಯು ಚುಂಬಿಸುವುದು ಒಂದು ದಿನ ಅಪಹರಿಸಿ

ನಿರಂತರ 86

Image
ಯಾರಿವಳು ಕುಶಲಮತಿ ಇವಳ ಅಂದಕಿಲ್ಲ ಮಿತಿ ಚೆಂದದ ಬಂಗಾರದ ಆಕೃತಿ ಸೊಬಗ ಹೆಚ್ಚಸಿದೆ ಮೂಗುತಿ ಎಂದು ಆಗುವೆನೋ ಇವಳ ಪತಿ

ನಿರಂತರ 85

Image
ಬರಡು ದಾರಿಯ ಪಯಣಿಗ ನಾನು ಎಚ್ಚರ ತಪ್ಪಿದರೆ ಸಾವುಂಡು ಕ್ಷಣಿಕದಲಿ ಮುನ್ನುಗ್ಗಿ ನಡೆದರೆ ಗುರಿಯುಂಟು ಸನಿಹದಲ್ಲಿ

ನಿರಂತರ 84

Image
ನನ್ನ ಸ್ವಪ್ನಕ್ಕೂ ನಿನ್ನದೇ ಗುಂಗು ಇರುಳು ಕಳೆಯದು ನೀನು ಬಾರದೆ ನಿಸ್ವಪ್ನವಾಗಿವೆ ನನ್ನ ಕೋಟಿ ಕನಸುಗಳು  ಬಂದುಬಿಡು ಇಗಲೇ ಸ್ವಪ್ನಲೋಕದ ಸುಂದರಿಯೇ

ನಿರಂತರ 83

Image
ಯಾರೇ ನೀ ಹೊಂಬಣ್ಣದ ನಗುವ ಚೆಲ್ಲುವ ತಾರೆ ನಿನ್ನ ವೈಯಾರಕ್ಕೆ ಅಲಂಕರಿಸಿದೆ ಹಸಿರ ಬಣ್ಣದ ಸೀರೆ ನಿನ್ನ ನೆನಪಾದರೆ ಆಗುವುದು ಹೃದಯಕ್ಕೆ ತೊಂದರೆ ನೀನು ಜೊತೆಯಾದರೆ ಬದುಕು ಅನುದಿನವು ಸಕ್ಕರೆ