Posts

Showing posts from April, 2020

ನಿರಂತರ 121

Image
ಕಳೆದೋಗುವ ಆಸೆ ಕಾಡೊಳಗೆ ಯಾರದ್ದು ಸದ್ದಿಲ್ಲ ಯಾರದ್ದು ಮಾತಿಲ್ಲ ನಿಶಬ್ದ ಕೋಟೆಯೊಲ್ಲೊಂದು ವಿಸ್ಮಯದ ಗೂಡು ಸುಮ್ಮನೆ ನೋಡಬೇಕು ಪ್ರಕೃತಿಯ ವೈಶಿಷ್ಟ್ಯ ಹಸಿರು ಸೀರೆಯ ಉಟ್ಟು ನಿಂತಿಹಳು ನಿಸರ್ಗದ ತಾಯಿ ಹೆಮ್ಮರಗಳ ಬೆಳೆಸಿ ಸದ್ದಿಲ್ಲದ ಕೋಟೆಗೆ ಗಿಡ ಗಂಟೆಗಳೇ ಮಾಲೀಕರು  ನನಗುಂಟು ಆಸೆ ಕಳೆದೋಗುವ ಆಸೆ ಕಾಡೊಳಗೆ