ನಿರಂತರ 98

ನನ್ನ ಪಯಣದ ನಲ್ಮೆಯ ನಾವಿಕ
ನಿನ್ನ ನೆರಳಲ್ಲೇ ಉಳಿಯುವ ತವಕ
ನಿನ್ನ ಪ್ರೀತಿಯ ಅಲೆಗಳು ಬಂದಿಸಿವೆ ನನ್ನ
ಅದೃಷ್ಟವೇ ಸರಿ ನೀ ನನ್ನ ವರಿಸಿರುವೆ
ಕಳೆದೊಗಲು ಇನ್ನೇನಿದೆ  ನೀ  ಆವರಿಸಿದ ಮೇಲೆ
ಸಮಯವೂ ಸರಿಯುತ್ತಿವೆ ಅದ್ಭುತವಾಗಿ
ನೀ ನನ್ನ ಅಲಂಕರಿಸಿದ ಮರುಕ್ಷಣದಿಂದ
ನೀ ಇದ್ದರೆ ಸನಿಹ ಮರೆತೋಗುವ ಜಗವ
ಮಗುವಾಗುವ ಒಂದು ಕ್ಷಣ ನಿನ್ನ ಮಡಿಲೊಳಗೆ


Comments