ನಿರಂತರ 101
ನಿನ್ನ ಸಿಹಿ ನೆನಪ ಸಾಗರದಲ್ಲಿ ಮಧುರ ಕ್ಷಣಗಳೇ ಉಲ್ಲಾಸದ ಅಲೆಗಳು ಪ್ರೀತಿಯ ಅನುರಾಗ ಅರಳಿಸಿ ಕೊಡೆಹಿಡಿದವಳು ನೀನಲ್ಲವೇ ನಿನ್ನ ಸಳೆತದ ಭೂಕಂಪಕ್ಕೆ ಬಲಿಯಾದವನು ನಾನಲ್ಲವೇ
ನನ್ನ ಬಗ್ಗೆ ಮಲೆನಾಡ ಹುಡುಗ ,ನಾಲ್ಕು ಮನೆ ಇರೋ ಒಂದು ಚಿಕ್ಕ ಚೊಕ್ಕ ಊರು, ಹೆಸರು ಒಂತರಾ ವಿಚಿತ್ರ ಹಾರೋಗೊಪ್ಪ ಅಂತ ಯಾರು ಹಾರ್ಕೊಂಡು ಬಂದು ಹೆಸರು ಇಟ್ರೊ ಗೊತ್ತಿಲ್ಲ ನನ್ನ ಇನಿಶಿಯಲ್ ಜೊತೆ ಸೇರ್ಕೊಂಡಿದೆ. ಜೀವನದ ಅಲೆಯಲ್ಲಿ ಸದ್ದಿಲ್ಲದೇ ಪದಗಳ ಕಟ್ಟುವ ಕಾಯಕ . ಅನಿಸಿದ್ದು ಕೇಳಿದ್ದು ನಡೆದಾಡುವ ವರ್ತಮಾನವ ಪರಿಚಯಿದೋ ಪಾತ್ರಧಾರಿಯಾಗಿ ಪ್ರತಿಬಿಂಬಿಸುವ ಪ್ರಯತ್ನದಲ್ಲಿ ಬರವಣಿಗೆ ಸಾಲುಗಳು ಸಾಗುತ್ತ ಇದಾವೆ