Posts

Showing posts from 2018

ನಿರಂತರ 82

Image
ಹಗುರಾಗಿದೆ ಈ ಹೃದಯ ನೀ ಬಂದಮೇಲೆ ಮೂಡಿದೆ  ಭರವಸೆಯ ಕನಸು ನಿನ್ನಗಮನದಿಂದ ಎಲ್ಲೊ ನೋಡದ ಅದ್ಬುತ ಸುಂದರಿಯ ಪ್ರವೇಶ ನಿಮಿಷಾರ್ಧದಲ್ಲೇ ಸೃಷ್ಟಿಸಿದೆ ಹೊಂಗನಸಿನ ಇತಿಹಾಸ

ನಿರಂತರ 81

Image
ಕೊಲ್ಲುತಿವೆ ನೆನಪುಗಳು ಅಳಿಸಲಾಗದೆ ತುಂಬಾ ಸಂಬ್ರಮಿಸಿದ್ದ ಹೃದಯದ ಆಣೆಕಟ್ಟು ಚೂರಾಗಿ ದುಮ್ಮಿಕ್ಕಲು ಹಾತೊರೆತ್ತಿದೆ ನೆಪವೊಂದೇ ಕನಸೆಲ್ಲ ನೂಚ್ಚು ನೂರು ಮಾಡಿ ಪ್ರೀತಿಯ ಬಡತನಕೆ ನನ್ನನು ತಳ್ಳಲು ಕಾಯುತ್ತಿದೆ

ನಿರಂತರ 80

Image
ನೀ ಬಂದ ದಾರಿಯಲ್ಲಿ ಹೊಸ ಕಥೆಯೊಂದು ಶುರುವಾಗಿ ನನ್ನೆದೆಯ ಸೇತುವೆಯಲ್ಲಿ ಹೊಸ ಕನಸೊಂದು ಮೂಡಿ ಬಚ್ಚಿಡುವೆ ನಿನ್ನ ಹೆಸರೊಂದೇ ನನ್ನೆದೆಯ ಗೂಡಿನಲಿ

ನಿರಂತರ 79

Image
ಕೇಳಿದೆ ಮನಸ್ಸು ಹೇಳದ ಮಾತಿಗೆ ಬಾರದೆ ಹೋದರೆ ದೂರವೇ ಸರಿವುದು ಮನಸಿನ ಕೊಂಡಿ ಕಳೆದುಕೊಳ್ಳದೆ ಮುನ್ನುಗ್ಗು ಬಣ್ಣದ ಬದುಕಿದೆ ಮುಂದಿನ ದಿನದಲ್ಲಿ

ನಿರಂತರ 78

Image
ಮುಂದೊಂದು ದಿನ ನಿಮ್ಮ ನಡೆಯ ನಡುವೆ ನಾನಿಲ್ಲದಿದ್ದಾಗ ನನ್ನ ನೆನಪು ನೆನಪಾಗದಿರುವುದೇ

ನಿರಂತರ 77

Image
ನಿನ್ನ ನಗುವಿನ ಹೂದೋಟವ ಕಾಯುವ ಪ್ರೀತಿಯ ರಕ್ಷಕನು ನಾನು ಸಂಬಳ ಕೊಡದಿದ್ದರೂ ಸರಿಯೇ ನಿನ್ನ ಬಾಡದ ಹಾಗೆ ಕಾಯುವೆನು

ನಿರಂತರ 76

Image
ಮನಸಲ್ಲೇ ನುಂಗುವಳು ನೋವ ನಗುವಿನ ಒಳಗೊಂದು ಕಣ್ಣೀರ ಕಡಲ ಬತ್ತದೆ ಹಾಗೆ ಒಬ್ಬಳೇ ಸಲುಹುವಳು ಇವಳಿಗೆ ಇವಳೊಬ್ಬಳೇ ಸಾಟಿ ಗುಪ್ತಗಾಮಿನಿ

ನಿರಂತರ 75

Image
ದೀಪವೇ ಬೆಳಗು ಕತ್ತಲೆಯ ಕಾರ್ಮೋಡವ ಸರಿಸಿ  ಶಾಂತಿಯ ಕರುಣಿಸಿ  ಉತ್ತಮ ಆರೋಗ್ಯವ ಒದಗಿಸಿ  ಮುನ್ನಡೆಸು ಎಲ್ಲರನ್ನೂ ಯಶಸ್ಸಿನ ಮೆಟ್ಟಿಲ ಏರಿಸಿ ದೀಪವೇ ನೀ ಬೆಳಗು ಎಲ್ಲರ ಹೃದಯದಲ್ಲಿ ಪ್ರೀತಿಯ ಅಡಗಿಸಿ

ನಿರಂತರ 74

Image
ಬದುಕಲ್ಲಿ ಬದಲಾವಣೆ ಅನಿವಾರ್ಯ ಬದುಕು ಬದಲಾಗಬೇಕೇ ಹೊರತು ಬದಲಾಯಿಸೋ ಮನುಷ್ಯನಲ್ಲ

ನಿರಂತರ 73

Image
ಕತ್ತಲ ಅಲೆಗೆ ಬೆಳಕಿನ ಹಣತೆಯ ಹಚ್ಚಿ ಮೂರಂಗುಲದಿಂದ ಶುರುವಾಗಿ ಜಗವ ಬೆಳಗೋ ಜಗಜ್ಯೋತಿಯಾಗಿ ಹೊಮ್ಮಿ ಅಂದಕಾರವ ತೊಳೆದು ಪ್ರೀತಿಯ ಸಂಭ್ರಮ ಸೃಷ್ಟಿಸೋ ಬೆಳಕಿನ ಅಲೆಯೇ ದೀಪಾವಳಿ

ನಿರಂತರ 72

Image
ಪ್ರತಿ ಹುಡುಗನ ತುಡಿತ ಅವನಾಕೆಯ ಸೀರೆಯಲ್ಲಿ ನೋಡುವ ತವಕ ನೀರೆಯ ಸೀರೆಯ ಗೆಜ್ಜೆಯ ದನಿಯಲ್ಲಿದೆ ಅವನ ಕೋಟಿ ಕೋಟಿ ಕನಸು ಕಳೆದೊಗಲು ಇನ್ನೇನು ಬೇಕು ಅವನಿಗೆ ಅವಳಂದವ ನೋಡಿದ ಮೇಲೆ

ನಿರಂತರ 71

Image
ನನ್ನ ಪ್ರೀತಿಯ ಪುಸ್ತಕದ ಪದಗಳೆಲ್ಲ ನಿನ್ನಿಂದ ಶುರುವಾಗಿ ಪ್ರತಿ ಪುಟಗಳೆಲ್ಲವೂ ನಿನ್ನ ನೆನಪಾಗೆ ಉಳಿದು  ಕಟ್ಟಿಡುವೆ ನಿನ್ನಯ ನೆನಪಿನ ಬುತ್ತಿಯ ನನ್ನೀ ಕಡತದಲ್ಲಿ

ನಿರಂತರ 70

Image
ಒಂಟಿ ತನವೆನ್ನೋ ನೋವಿಗೆ ಪ್ರೀತಿಯ ಅಮೃತವ ಬಡಿಸಿ ನನ್ನ ಬದುಕೆಂಬ ಮೂರಕ್ಷರಕ್ಕೆ ಹೊಸ ಸಡಗರವ ತಂದವಳು ನೀನು ನನ್ನ ಬದುಕಿನ ಬಣ್ಣದ ಕಾಮನಬಿಲ್ಲು.

ನಿರಂತರ 69

Image
ನಕ್ಕಳು ನನ್ನಾಕೆ ಕಳೆದೋದೆ ನಾನು ಕ್ಷಣಿಕ ಮರು ಮಾತಾಡದೆ ಅವಳ ನಗುವಲ್ಲಿ ನನ್ನ ಹುಡುಕುತ ನಿಂತೇ

ನಿರಂತರ 68

Image
ಜೋಗದ ಸಿರಿಯೊಂದಕ್ಕೆ ಮುದ್ದು ಬೆಡಗಿಯ ಭೇಟಿ ಇವಳ ಸೊಬಗಿಗೆ ರಾಜ ರಾಣಿಯೇ ಆಡಳಿತ ಬಿಟ್ಟು ಸುಮ್ಮನಾಗಿವೆ ರೋರೋ ರಾಕೆಟ್ಟುಗಳು ಹಾರುವುದನ್ನೇ ನಿಲ್ಲಿಸಿ ಇವಳಂದವ ನೋಡಲು ನಿಬ್ಬೆರಗಾಗಿ ನಿಂತಿವೆ ಭೋರ್ಗರೆವ ನೀರಿನ ದನಿಯಲ್ಲಿ ನಿನ್ನ ಕಿರುನಗೆ ಜಲಧಾರೆಯ  ಮೆರುಗು ಹೆಚ್ಚಿಸಿದೆ

ನಿರಂತರ 67

Image
 ಬದುಕಿನ ಅಲೆಯಲಿ  ಭರವಸೆಯ ದೋಣಿಯ  ಹರಿವಿನ ಹಿಡಿತ ನಿನ್ನ  ಕೈಯಲ್ಲಿನ ಹುಟ್ಟಲಿದೆ

ನಿರಂತರ 66

Image
ಹಸಿ ಕೋಪವ  ಬಿಟ್ಟು ತುಸು ನಕ್ಕು ಬಿಡು ಕೂಸೇ ನಿನ್ನೆಲ್ಲಾ ಆಸೆಗೆ ಹೊಸ ದಾರಿ ಹುಡುಕುವೆ ಇಂದೇ

ನಿರಂತರ 65

Image
ವಿಹರಿಸು ನಿನ್ನಿಷ್ಟಕ್ಕೆ ಬಂಧನವಿಲ್ಲದೆ ಮನಸೋ ಇಚ್ಛೆ ಆನಂದಿಸು ನಿಂಗನಿಸಿದ ಹಾಗೆ ನಿನ್ನ ಕನಸ ನೆರವೇರಿಸೋ ಸಾಹುಕಾರ ನಾನು ಆಜ್ಞಾಪಿಸು ಏನನ್ನು ಹೊತ್ತು ತರಲಿ ನಿನ್ನ ಖುಷಿಯ ನಿಲುವಿಗೆ

ನಿರಂತರ 64

Image
ಕೊಂಚವೇ ತಿರುಗಿ ನೋಡು ಬಾಲೆ ನಿನ್ನ ಪ್ರತಿಬಿಂಬ ಅಡಗಿದೆ ನನ್ನೊಳಗೆ ಕನ್ನಡಿಗೂ ಕಾಣದೆ ಒಳಗೆ ಸೇರಿರುವೆ ಕೊನೆತನಕ ಜೋಪಾನವಾಗಿರುವೆ ಕನ್ನಡಿಗೆ ನಾ ಕಾಣುವ ತನಕ

ನಿರಂತರ 63

Image
ಎಲ್ಲಿಂದ ಬಂತು ಈ ನಾಚಿಕೆ ಮುಂಗುರುಳ ಮೇಲೆ ಕೈಯಿರಿಸಿ ಮೊಗವ ತಗ್ಗಿಸಿ ನೆಲ ಕೀಳೋ ಕಲಾತ್ಮಕತೆ ಯಾರಿಂದ ಬಂದು ನನಲ್ಲಿ ಹೇಳದೆ ಎಲ್ಲೋಡುವೆ ಕುಸುಮೆ

ನಿರಂತರ 62

Image
ಅಂದದ ಹೆಣ್ಣೇ ನಿನಗೇಕೆ ಶೃಂಗಾರ ಸುಮ್ಮನೆ ನಕ್ಕರೆ ಸಾಕು ಸ್ತಬ್ದವಾಗುವುದು ನನ್ನೀ  ಚಲನವಲನ ನಿನ್ನ ಚಂದುಟಿಯ ನಗುವಿಗೆ

ನಿರಂತರ 61

Image
ತಿಳಿ ನೀಲಿ ಆಕಾಶ ಕೆಂಪಾಗಿ ನಗುತಿತ್ತು ತಿಳಿ ಹಸಿರ ಕಾನನ ಒಣಗಿ ಅಳುತಿತ್ತು ಹರಿಯೋ ಜಲಪಾತ ಹನಿಯಲ್ಲಿ ನಿಂತಿತ್ತು ತಂಗಾಳಿ ಬಿಸಿಯಾಗಿ ಕರಗಿದೆ ಸಂಪತ್ತು  ಇನ್ನಾದರೂ ತಡಿಯೋಣ ಪ್ರಕೃತಿಯ ವಿಪತ್ತು

ನಿರಂತರ 60

Image
ಜೋರಾಗಿ ನಕ್ಕುಬಿಡೆ ಒಮ್ಮೆಲೆ ಖುಷಿಯಿಂದ ಹತ್ತಿ ಬಿಡುವೆ ಉಯ್ಯಾಲೆ ನಿನ್ನ ಜೊತೆಯಿದ್ದರೆ ನನಗಿಲ್ಲ ಕತ್ತಲೆ ನಿನ್ನ ನಗುವೇ ನನಗೆ ಪ್ರೀತಿಯ ಅಲೆ

ನಿರಂತರ 59

Image
ನೆನಪಿನ ಅಲೆಯಲಿ ನಿನ್ನದೇ ಹನಿಗಳು ತೇಲುತ್ತಿವೆ ಅನುದಿನ

ನಿರಂತರ 58

Image
ನನ್ನ ಪ್ರೀತಿಯ ಬಳ್ಳಿಗೆ ನಿನ್ನ ಮರವೆ ಆಸರೆ ಕೊನೆತನಕ ಹೂವು  ತುಂಬಿ ನಗುತಿರಲಿ ನಮ್ಮ ಈ ಭಾಂದೌವ್ಯ

ನಿರಂತರ 57

Image
ನಿನ್ನ ಮೌನಕ್ಕೆ ನಾ ಮೂಕನಾಗುವೆ ನಿನ್ನ ನಗುವಿಗೆ ನಾ ಕಾರಣನಾಗುವೆ

ನಿರಂತರ 56

Image
ನಿನ್ನ ಅಲೆಗೆ ನನ್ನ ಸೆಳೆದು ಕಡಲ ತೀರ  ನಮಗೆ ಕಾದು ಹನಿಯ ಬಿಂದು ನಮ್ಮ ಬಡಿದು ಸಮಯ ಸರಿದಿದೆ ನಿನ್ನಲೆಯಲ್ಲಿ ಬೆಸೆದು

ನಿರಂತರ 55

Image
ಆವರಿಸು ನೀ ಮೆಲ್ಲನೆ  ಕಳೆದು ಹೋಗುವ  ನಾ ಸುಮ್ಮನೆ  ನಿನ್ನ ಜೊತೆಗಿದ್ದು ಮಾಡುವೆ ಪಾಲನೆ  ಕಟ್ಟುವೆ ನಿನಗೊಂದು ಪ್ರೀತಿಯ ಅರಮನೆ

ನಿರಂತರ 54

Image
 ಒಲವ ಮಳೆಗೆ ಕಾದು  ನಿನ್ನ ಹನಿಯ ಕೊಂಡು  ನನ್ನ ಮನಕೆ ಹೊದಿಸಿ  ಕಾದಿದೆ  ಹೃದಯ ನಿನಗಾಗಿ

ನಿರಂತರ 53

Image
ನಿನ್ನ ಕಣ್ಣಲ್ಲಿದೆ ನನ್ನ ಮುಂದಿನ ದಾರಿ ನಡೆದೇ ಸಾಗೋಣ ಜೊತೆಯಾಗಿ ನಮ್ಮಿಬ್ಬರ ಪಯಣ ಮುಗಿಯುವ ತನಕ

ನಿರಂತರ 52

Image
ನೀನಂಗೆ ಸ್ವಂತ ಆದ ಮೇಲೆ ಮರೆತೇ ಬಿಡುವೆ ಜಗವ ನಿನ್ನ ಮಡಿಲಲಿ ಕೂಳಿತು ಮತ್ತೇನು ಬೇಡ ಜಗತ್ತೇ ನಿನಲ್ಲಿ ಕಾಣುವಾಗ

ನಿರಂತರ 51

Image
ಭಾವನೆಗೆ ಮೊಳೆ ಹೊಡೆದು ತಗಲು ಹಾಕಿದರೆ ಹೃದಯದ ಗೋಡೆ ನಿನ್ನ ಸುಮ್ಮನೆ ಬಿಡುವುದೇ

ನಿರಂತರ 50

Image
ಬ್ರಮ್ಮನಿಗೊಂದು ಪತ್ರ ಬರೆಯುವಾಸೆ ಕನಸಲ್ಲಿ ಕಂಡ ಕನ್ನೆಯ ನನ್ನ ಬದುಕಲ್ಲಿ ಬರಮಾಡಿ ನನಗೊಂದು ಬಾವನ ಕೋಟೆಯ ಕಟ್ಟಲು ನೇರವಾದ ಸೂತ್ರದಾರ ನಿನಗಿದೋ ನನ್ನಯ ಅನಂತ ಅನಂತ ನಮನಗಳು

ನಿರಂತರ 49

Image
ಕಾಲ ಕಳೆಯದೆ ಇದ್ದೀತೆ ಬದುಕಿಗೆ ನೀ  ಬಂದ  ಮೇಲೆ ಹೊಂಗನಸ ಪರ್ವ ತಂದವಳು ನೀನು ನಿನ್ನ ಭಾವನಾ ಲಹರಿ ನನ್ನ ಆವರಿಸಿದೆ

ನಿರಂತರ 48

Image
ಗುಟ್ಟೊಂದು ಹೇಳುವುದಿದೆ ಗೆಳತಿ ಮರು ಮಾತನಾಡದಿರು ಸುಮ್ಮನೆ ಹೇಳಿ ಮುಗಿಸುವೆ ಬಹು ಬೇಗನೆ

ನಿರಂತರ 47

Image
ನೇರ ನುಡಿಗೆ ನೂರೆಂಟು ವೀಘ್ನ ಪೊಳ್ಳು ನುಡಿಗೆ ನೂರೆಂಟು ದಾರಿ

ನಿರಂತರ 46

Image
ಕಂಡಿದ್ದು ಸತ್ಯವಾದರೂ ಕಂಡಹಾಗೆ ಹೇಳುವುದು ಸತ್ಯಕ್ಕೆ ಪೆಟ್ಟು ಕೊಟ್ಟಂತೆ

ನಿರಂತರ 45

Image
ಚಂದುಟಿಯ ನಗುವ ನಯನ ನಿನಗೆ ಮೀಸಲು ಕದ್ದು ನೋಡಿದರು ಸರಿಯೇ ಇನ್ನೊಮ್ಮೆ ನಿನ್ನನ್ನು ನೋಡುವಾಸೆ

ನಿರಂತರ 44

Image
ಬಣ್ಣವೇ ಮಾಸದ ಬದುಕಲ್ಲಿ ನಿನ್ನಯ ತಿಳಿ ಹಸಿರ ನಗುವಿನ ಹನಿಯ ಬಂಧಿಸಿ ಇಡುವಾಸೆ

ನಿರಂತರ 43

Image
ಸುಮ್ಮನೆ ಇದ್ದ ಹೃದಯ ಬಯಸಿದೆ ನಿನ್ನನ್ನು ನನ್ನ ನೆರಳಿಗೂ ನಿನ್ನದೇ ಚಿಂತೆ ಎಂದು ಜೊತೆಯಾಗುವೆಯೆಂದು

ನಿರಂತರ 42

Image
ನನ್ನ ಮನದ ಹಣತೆಗೆ ನಿನ್ನ ಪ್ರೀತಿಯೇ ಚಿಲುಮೆಯ ಜ್ಯೋತಿ ಎಂದೆಂದಿಗೂ ಬೆಳಗುತಿರಲಿ ನಮ್ಮ ಪ್ರೀತಿಯ ಪಲ್ಲಕ್ಕಿ ಹೊತ್ತ ತೀರು 

ನಿರಂತರ 41

Image
ಸಮಯ ಸಾಕಾಗುತ್ತಿಲ್ಲ ನಿನ್ನ ಜೊತೆಗೆ ಪಯಣಿಸಲು ದೇವರಿಗೊಂಡು ಪತ್ರ ಬರೆಯುವಾಸೆ ಮತ್ತೆರಡು ತಾಸು ಹೆಚ್ಚು ಮಾಡೆಂದು

ನಿರಂತರ 40

Image
ನಿನ್ನ ಕಣ್ಣ ಕಡಲಿನಲ್ಲಿ ಚಿಕ್ಕ ಮೀನಾಗಿ ಈಜುವ ಆಸೆ ಕೊನೆ ಇಲ್ಲದ ತೀರವ ಸೇರಲಿ ನಮ್ಮ ಪ್ರೀತಿಯ  ನೌಕೆ

ನಿರಂತರ 39

Image
ನನ್ನ ಬಾಳೆಂಬ ಸುನಾಮಿಯಲ್ಲಿ ನಿನ್ನ ಅಲೆಯೇ ಮೊದಲು ಬಂದು ನನ್ನ ಬಡಿದು ಎಬ್ಬಿಸಿದ್ದು ನಾ ಇನ್ನು ಹೊರಬಂದಿಲ್ಲ ನಿನ್ನ ಅಲೆಗೆ ಸಿಲುಕಿ

ನಿರಂತರ 38

Image
ಒಂದೊಳ್ಳೆ ಹಸರಿಡು ಗೆಳತೀ ಕೊನೆ ತನಕ ಉಳಿಯಲಿ ನನಗೆ ಆ ಹೆಸರ ನಿನ್ನೊಬ್ಬಳೇ ಕರಿಬೇಕು ಕಣ್ಮುಚ್ಚಿ ನಾ ಬರಬೇಕು ನಿಂಹಿಂದೆ

ನಿರಂತರ 37

Image
ಅವಳ ಹೆಜ್ಜೆಯ ಗುರತ್ತಲಿದೆ ನನ್ನ ದಾರಿಯ ಪಯಣ ಸುಮ್ಮನೆ ಸಾಗಬೇಕು ಅವಳ ಜೊತೆಗೆ ಕನಸನ್ನು ಹೊತ್ತು

ನಿರಂತರ 36

Image
ಎಂದೋ ಶುರುವಾಗಿದೆ ಎಂದೋ ಬರೆದಾಗಿದೆ ನನ್ನ ನಿನ್ನ ಬಂಧನದ ಮೂರು ಗಂಟಿನ ನಂಟು

ನಿರಂತರ 35

ಬಂದಿಯಾಗಿ ನೂರು ದಿನ ಬದುಕುವುದ್ದಕ್ಕಿಂತ ಬಂದೀಖಾನೆಯಲ್ಲಿ ನೂರು ವರುಷ ಇರುವುದೇ ಲೇಸು

ನಿರಂತರ 34

ಬದಲಾಗು ನಿನಗಾಗಿ ಇಲ್ಲವೇ ಬದಿಗಾಗುವೆ ನಿನ್ನಿಂದಲೇ ಶುರುಮಾಡು ಕಾಯಕ ಈಗಿಂದೀಗಲೇ 

ನಿರಂತರ 33

ಹಳಸಿತೇ ಸಂಬಂಧ ನಾಲ್ಕೇ ದಿನಕ್ಕೆ ಓಡುತ್ತಿವೆ ಸಂಬಂಧಗಳು  ಬಲು ದೂರಕ್ಕೆ ವಾಸ್ತುಸ್ಥಿತಿಯ ತಿಳಿಯೋ ಮನುಜ ನಿನ್ನಷ್ಟಕ್ಕೆ ಸಂಬಂಧದ ಕೊಂಡಿಯ ಗಟ್ಟಿ ಮಾಡಿಕೋ ಹಿಂದಕ್ಕೆ

ನಿರಂತರ 32

ಎಂಕಾಂಗಿ ಸವಾಲುಗಳು ಬರೆದಿಡುತ್ತವೆ ಬಣ್ಣವೇ ಮಾಸದ ಜೀವನದ ಸಾಹಸ ಗಾದೆ 

ನಿರಂತರ 31

ನನ್ನ ನಾಳೆಗೆ ಇಂದಿನ ನೆಮ್ಮದಿ ಬಲಿ ಕೊಟ್ಟು ಕಂಬಳಿ ಹೊದ್ದು ಮಲಗಿದರೆ ನಾಳೆಯ ನಾಡಿದ್ದು ಮೌನವಾದರೆ ಇಂದಿನ ದಿನವ ಪುನಃ ಕೊಡುವರಾರು

ನಿರಂತರ 30

ಸುಡುಗಾಡಿನಲ್ಲಿ ನೆಮ್ಮದಿ ಕಂಡವನು ಶಿವ ನೆಮ್ಮದಿ ಹಾಳು ಗೆಡುವಿ ಸುಡುಗಾಡು ಮಾಡಿ ಕೊಳ್ಳುತ್ತಿರುವವನು ಮಾನವ

ನಿರಂತರ 29

ಅಪಾರದರ್ಶಕ ಕನಸುಗಳ ವಿಮುಕ್ತಿಗೆ  ಪಾರದರ್ಶಕತೆ ಕೊಡುವುದೇ ಮುಕ್ತಿ  ಅದು ನಿಮ್ಮ ಕೈಯಲ್ಲಿರುವ ಶಕ್ತಿ 

ನಿರಂತರ 28

ಮರು ಭೂಮಿಯಲ್ಲೂ ಮರ ನೆಡುವ ತಾಕತ್ತಿರುವವನಿಗೆ ತಣ್ಣೀರಿನಲ್ಲಿ ಮುಳುಗಲಾರೆ ಎನ್ನುವನೆ

ನಿರಂತರ 27

ಅಂಗೈಯಲ್ಲಿ ನಿನ್ನ ರೇಖೆ  ಬರೆದಿಲ್ಲ ಅಂಗಾತ ಬಿದ್ದು ಎದ್ದರೆ  ರೇಖೆ ತನ್ನಿಂದ ತಾನೇ ಬರೆಸಿಕೊಳ್ಳುವುದು 

ನಿರಂತರ 26

ನನ್ನ ಕನಸುಗಳ ಅರಮನೆಗೆ  ಗೆಳತೀ ನಿನ್ನದೊಂದೇ ಹೆಸರು ನಿನ್ನ ಒಡನಾಟಕ್ಕೆ ಯಾರಿಲ್ಲ ಸಾಟಿ  ನಾ ಕಳೆದೋದೆ ನನ್ನನ್ನೇ ಮರೆತು

ನಿರಂತರ 25

ಬಚ್ಚಿಟ್ಟ ಕಣ್ಣಲ್ಲಿ ಮೌನಗಾಳ ಮಾತು ಬಿಚ್ಚಿಟ್ಟ ಮನಸ್ಸಲ್ಲಿ ಹೃದಯದ ಮಾತು

ನಿರಂತರ 24

ಬ್ರಮ್ಮ ಬರೆದ ನನ್ನ ಹಣೆ ಬರಹ ಹೆಣ ವಾಗುವ ಮೊದಲೇ ಹಣ ಸಂಪಾದಿಸು ಎಂದು ಅವನಿಗೇನು ಗೊತ್ತು ನಮ್ಮ ಟೇಲರ್  ಜೇಬು ಇಡುವುದ ಮರೆತನೆಂದು

ನಿರಂತರ 23

ನನ್ನ ಬದುಕಿಗೆ ಬಂದು ನನ್ನನೆ ನೀ  ಕೊಂಡು ಇಬ್ಬರ ಬಂಧನ ಶುರು ಆದ ಮೇಲೆ ಮತ್ತೇನಿದೆ ಕಾಲ ಕಳೆಯದೆ ಇದ್ದೀತೆ

ನಿರಂತರ 22

ಕನಸ್ಸಿನ ಕನ್ನೆಯ ಹುಡುಕಲು ತಪಸ್ಸಿಗೆ ಹೊರಟಿರುವೆನು ನಿಮ್ಮ ಹತ್ತಿರದ ಗುಹೆ ಹೇಳುವಿರಾ

ನಿರಂತರ 21

ಬಾರದೆ ಹೋದ ಮನಸ್ಸಿನ ಹಿಂದೆ ಹೋದರೆ ಭಾರ ವಾಗುವುದು ನಿಮ್ಮದೇ ಹೃದಯ ನಡೆದಾಡುವ ವಸ್ತುಗಳಿಗಿಂತ ನಡೆಯದೆ ಇರುವ ವಸ್ತುಗಳ ಬೆಲೆಯೇ ಜಾಸ್ತಿ.

ನಿರಂತರ 20

ಉತ್ತಮ ಬದಲಾವಣೆಯೇ ಬದುಕಿನ ಮಹತ್ವಪೂರ್ಣ ಮೈಲಿಗಲ್ಲು

ನಿರಂತರ 19

 ಸಾದನೆಯೆನ್ನುವುದು ಸೂಕ್ಷ್ಮವಲ್ಲ  ಅತಿ ಸೂಕ್ಷ್ಮವನ್ನು ಪರಿಗಣಿಸಿ  ಕಾರ್ಯ ಪೂರ್ಣಗೊಳಿಸುವ ವೈಖರೀ

ನಿರಂತರ 18

ಭಾವನೆಗಳು ಬಂದಿಯಾಗಿವೆ ಹತ್ತಿರಕ್ಕೂ ಸುಳಿಯುತ್ತಿಲ್ಲ ಬಿಡುಗಡೆಯ ಭಾಗ್ಯ

ನಿರಂತರ 17

ತೀರದ ದಾರಿಗೆ ಕಾದಿದೆ ಮನಸ್ಸಿನ ಪುಟ ತೆರೆಯಲು ಒಲ್ಲೆ ಎನ್ನುತ್ತಿದೆ ಕಾಣದ ಕದ ಮರೀಚಿಕೆಯಾಗದೆ ಮರಳಿ ಬರುತ್ತಿದೆ  ನನ್ನ ಈ ಬಿಡದ ನೆರಳಿನ ಬಿಂಬ

ನಿರಂತರ 16

ಏನಿದೆ ಇನ್ನೇನಿದೆ ಬದುಕಿನ ಕಥೆಯಲಿ ನಿತ್ಯವೂ ಅದೇ ಬೆಳಕಿನಿಂದ ಕತ್ತಲೆಯ ತನಕ ಪ್ರಪಂಚವೇ ನಮ್ಮೆದುರು ನಿಂತಿದೆ  ನಾವು ಅದರೆದುರು ನಿಲ್ಲುವುದು ಕ್ಷಣಿಕ

ನಿರಂತರ 15

ನನ್ನ ಜೀವನದ ಎರಡು ಗುಟ್ಟುಗಳು  ಒಂದು ಅರ್ಧ ಕಳೆದೊಗಿದೆ ಇನ್ನೊಂದು ಅರ್ಧ ಕಳೆದು ಹೋಗುವುದಿದೆ

ನಿರಂತರ 14

ನನ್ನ ನೆರಳಿನ ನೆಂಟ  ಗಂಟು ಕಟ್ಟಿ ಹೊರಟ ನಾ ಎಚ್ಚೆತ್ತು ನನ್ನ ಗಂಟು ಹುಡುಕುವ ಮುನ್ನ  

ನಿರಂತರ 13

ಬತ್ತದ ಸಮುದ್ರಕ್ಕೆ ಬತ್ತಿ ಇಡಲು ಹೊರಟರೆ  ನಿಮ್ಮ ಮೇಲೆಯೇ ಸುತ್ತಿ  ಬರುವುದು ಸುನಾಮಿ

ನಿರಂತರ 12

ನಂಬಿಕೆ ಇಲ್ಲದ ನಾಳೆಗೆ  ದಿಕ್ಸೂಚಿ ಹಿಡಿದು ಕುಳಿತರೆ  ನಾಳೆಯ  ದಿಕ್ಕು ಬದಲಾದೀತೆ 

ನಿರಂತರ 11

ವಿಶ್ವ ಶಾಂತಿಗೋಸ್ಕರ ತಪಸ್ಸು  ಮಾಡೋರ್ಕ್ಕಿಂತ  ಡಿಸ್ಕೊ ಶಾಂತಿಗೋಸ್ಕರ ತಪಸ್ಸು  ಮಾಡೋರ ಸಂಖ್ಯೆ ಜಾಸ್ತಿ ಆಗಿದೆ 

ನಿರಂತರ 10

ಪ್ರಪಂಚವೇ ಪಕ್ವಾನವಾಗಿ ಅಲೆಗಳೇ ಹುಲಿಗಳಾಗಿ ನಮ್ಮೆನ್ನೆಲ್ಲ ಸೆಳೆದರೆ  ಎಲ್ಲಿಗೆ ಹೋಡಿಹೋಗುವುದು  ಅಲೆಗಳೇ ನಿಲ್ಲದ ಉರವುದಿದೆ  

ನಿರಂತರ 9

ಅವಳ ಪ್ರೀತಿಯ ಕಣ್ಣೀರಿಗೆ  ಸಾಗರವೇ ಸಿಹಿಯಾಗಿತ್ತು  ಅವನ ಹೃದಯ ಮಾತ್ರ   ಕರಗಿರಲಿಲ್ಲ

ನಿರಂತರ 8

ಬಂದಿಯಾಗೋ ಮನಸ್ಸೇ  ಯಾಕೆ ಹೀಗೆ ಮುನಿಸ್ಸು  ಸುಮ್ಮನೆ ಇರಲೂಬಹುದೇ  ಮೌನದ ಮಾತು ನಿಲ್ಲಿಸಿ 

ನಿರಂತರ 7

ಮಾತಿಗೆ ಶಕ್ತಿ ಇದೆ ಸರಿಯಾದ ಪ್ರಯೋಗ  ನಿಮ್ಮ ಜೀವನಕ್ಕೆ  ಲವಲವಿಕೆಯ ಲಸಿಕೆ 

ನಿರಂತರ 6

ಮುಖವ ನೋಡಿ ಮಾಡೋ  ಪ್ರೀತಿ  ಮುಖವಾಡ ಕಳೆದ ಮೇಲೆ  ಪಜೀತಿ  ಮಾನಸ ನೋಡೋ  ನನ್ನ ಸಂಗಾತಿ ನಿನ್ನ ಮೇಲೊಂದೆ ನನಗೆ ಸಂಪ್ರೀತಿ 

ನಿರಂತರ 5

ವಸ್ತುಗಳ ಜೊತೆ ಒಡನಾಟ  ವಕ್ತಿಗಳ ಜೊತೆ ಸೆಣೆಸಾಟ  ತಾತ್ಕಾಲಿಕ ತಲೆ ಮೇಲಿದೆ  ಶಾಶ್ವತ ಸಂದಿಮೂಲೆ ಸೇರಿವೆ

ನಿರಂತರ 4

ನಿನ್ನ ಕಣ್ಣಿನ ಕಾವಲಿನಲ್ಲಿ  ನನ್ನ ಕಥೆ ಬರೆದಿದ್ದರೆ ಸಾಕು  ಸಾಕು ನನ್ನ ಜನ್ಮ ಸಾರ್ಥಕ ನಿನ್ನ ಕೈ ಸೇರಿದ ನನ್ನ ಕಥೆ

ನಿರಂತರ 3

ನಿದ್ರೆಯಲ್ಲಿ ಕನಸುಗಳು ಓಡುತ್ತಿರುತ್ತವೆ ಎದ್ದಮೇಲೆ ಕನಸುಗಳು ನಡೆದಾಡುವಂತೆ  ಮಾಡುವುದು ನಿಮ್ಮ ಕೈಯಲ್ಲಿದೆ 

ನಿರಂತರ 2

ಬದುಕ ಬಂಡಿಯ ವೇಗಕ್ಕೆ    ಶೂನ್ಯ ಆಡಂಬರ ಹೊತ್ತ ಪಯಣಿಗನಾಗಿ ನಿಲ್ಲಬೇಕು

ನಿರಂತರ 1

ಮುಳುಗಿದೆ ಈ ಬದುಕು ಹನಿ ನೀರಿಲ್ಲದ ಪ್ರವಾಹಕ್ಕೆ ಸಿಲುಕಿ ಎಂದು ದಡ ಮುಟ್ಟುವುದೋ ಈ ತೂತಾದ ದೂಣಿಯಲ್ಲಿ