ನಿರಂತರ 136
ಕಂದ
ಪ್ರಪಂಚಕ್ಕೆ ಕಾಲಿರಿಸಿದ ನನ್ನ ಮುದ್ದು ಕಂದ
ನಿನ್ನ ಬಿಗಿ ಅಪ್ಪುಗೆಯೇ ನನಗೆ ಕೋಟಿ ಖುಷಿಯ ಪುಳಕ
ನಿನ್ನ ಮುಗ್ದ ನೋಟವೇ ಹೊಸ ಕನಸಿನ ಹೊಂಬಾಳೆ
ಹಂಬಲಿಸುತ್ತಿದ್ದೇನೆ ಅಪ್ಪ ಅನ್ನೋ ಎರಡಕ್ಷರವ ಕೇಳಲು
ನನ್ನ ಬಗ್ಗೆ ಮಲೆನಾಡ ಹುಡುಗ ,ನಾಲ್ಕು ಮನೆ ಇರೋ ಒಂದು ಚಿಕ್ಕ ಚೊಕ್ಕ ಊರು, ಹೆಸರು ಒಂತರಾ ವಿಚಿತ್ರ ಹಾರೋಗೊಪ್ಪ ಅಂತ ಯಾರು ಹಾರ್ಕೊಂಡು ಬಂದು ಹೆಸರು ಇಟ್ರೊ ಗೊತ್ತಿಲ್ಲ ನನ್ನ ಇನಿಶಿಯಲ್ ಜೊತೆ ಸೇರ್ಕೊಂಡಿದೆ. ಜೀವನದ ಅಲೆಯಲ್ಲಿ ಸದ್ದಿಲ್ಲದೇ ಪದಗಳ ಕಟ್ಟುವ ಕಾಯಕ . ಅನಿಸಿದ್ದು ಕೇಳಿದ್ದು ನಡೆದಾಡುವ ವರ್ತಮಾನವ ಪರಿಚಯಿದೋ ಪಾತ್ರಧಾರಿಯಾಗಿ ಪ್ರತಿಬಿಂಬಿಸುವ ಪ್ರಯತ್ನದಲ್ಲಿ ಬರವಣಿಗೆ ಸಾಲುಗಳು ಸಾಗುತ್ತ ಇದಾವೆ
Comments
Post a Comment