ನಿರಂತರ 121

ಕಳೆದೋಗುವ ಆಸೆ ಕಾಡೊಳಗೆ
ಯಾರದ್ದು ಸದ್ದಿಲ್ಲ ಯಾರದ್ದು ಮಾತಿಲ್ಲ
ನಿಶಬ್ದ ಕೋಟೆಯೊಲ್ಲೊಂದು ವಿಸ್ಮಯದ ಗೂಡು
ಸುಮ್ಮನೆ ನೋಡಬೇಕು ಪ್ರಕೃತಿಯ ವೈಶಿಷ್ಟ್ಯ

ಹಸಿರು ಸೀರೆಯ ಉಟ್ಟು ನಿಂತಿಹಳು
ನಿಸರ್ಗದ ತಾಯಿ ಹೆಮ್ಮರಗಳ ಬೆಳೆಸಿ
ಸದ್ದಿಲ್ಲದ ಕೋಟೆಗೆ ಗಿಡ ಗಂಟೆಗಳೇ ಮಾಲೀಕರು 
ನನಗುಂಟು ಆಸೆ ಕಳೆದೋಗುವ ಆಸೆ ಕಾಡೊಳಗೆ


Comments

Popular posts from this blog

ನಿರಂತರ 159

ನಿರಂತರ 99